ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಲ್ಡೀವ್ಸ್ ವಿದೇಶಾಂಗ ಸಚಿವ

🌷 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಲ್ಡೀವ್ಸ್ ವಿದೇಶಾಂಗ ಸಚಿವ
=================
ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರ ಆಯ್ಕೆಗಾಗಿ ಚಲಾವಣೆಯಾದ 191 ಮತಗಳ ಪೈಕಿ 143 ಮತಗಳನ್ನು ಶಾಹಿದ್ ಪಡೆದಿದ್ದಾರೆ.
===========
ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ 76 ನೇ ಅಧಿವೇಶನದ ಅಧ್ಯಕ್ಷರ ಆಯ್ಕೆಗಾಗಿ 193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಸೋಮವಾರ ಮತದಾನ ನಡೆಯಿತು. ಚುನಾವಣಾ ಕಣದಲ್ಲಿದ್ದ ಅಬ್ದುಲ್ಲಾ ಶಾಹಿದ್ 143 ಮತಗಳನ್ನು ಪಡೆದರೆ ಅಫ್ಘಾನಿಸ್ತಾನದ ಮಾಜಿ ವಿದೇಶಾಂಗ ಸಚಿವ ಡಾ. ಝಲ್ಮೈ ರಸೂಲ್ 48 ಮತಗಳನ್ನು ಪಡೆದರು.
============
ವಿಶ್ವಸಂಸ್ಥೆಯ ಪ್ರಾದೇಶಿಕ ಬದಲಾವಣೆಯ ನಿಯಮಗಳ ಪ್ರಕಾರ, ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರನ್ನು ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಗುಂಪಿನಿಂದ ಆಯ್ಕೆ ಮಾಡಬೇಕಿತ್ತು. ಅದರಂತೆ, ಶಾಹಿದ್ ಅವರನ್ನು ಆಯ್ಕೆ ಮಾಡಲಾಗಿದೆ
==========
👉 ಐದು ಗುಂಪುಗಳಿಂದ ಆಯ್ಕೆ
=========
ಸಾಮಾನ್ಯ ಸಭೆಯ ಐದು ಪ್ರಾದೇಶಿಕ ಗುಂಪುಗಳಾದ ಗ್ರೂಪ್ ಆಫ್ ಏಷ್ಯನ್ ಸ್ಟೇಟ್ಸ್, ಗ್ರೂಪ್ ಆಫ್ ಈಸ್ಟರ್ನ್ ಯುರೋಪಿಯನ್ ಸ್ಟೇಟ್ಸ್, ಗ್ರೂಪ್ ಆಫ್ ಲ್ಯಾಟಿನ್ ಅಮೆರಿಕನ್ ಮತ್ತು ಕೆರಿಬಿಯನ್ ಸ್ಟೇಟ್ಸ್, ಗ್ರೂಪ್ ಆಫ್ ಆಫ್ರಿಕನ್ ಸ್ಟೇಟ್ಸ್, ವೆಸ್ಟರ್ನ್ ಯುರೋಪಿಯನ್ ಮತ್ತು ಇತರ ಸ್ಟೇಟ್ಸ್ ಗ್ರೂಪ್​​ಗಳಿಂದ ಅಧ್ಯಕ್ಷರನ್ನುಆಯ್ಕೆ ಮಾಡಲಾಗುತ್ತದೆ. ಈ ವರ್ಷ ಏಷ್ಯಾ-ಪೆಸಿಫಿಕ್ ಗ್ರೂಪ್​ನಿಂದ ಆಯ್ಕೆ ಮಾಡಲಾಗಿದೆ
==========
👉 ಭಾರತ ಬೆಂಬಲ :
=========
ಶಾಹಿದ್ ಅವರ ಆಯ್ಕೆಗೆ ಆರಂಭದಿಂದಲೂ ಭಾರತ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಮಾಲ್ಡೀವ್ಸ್ ರಾಜತಾಂತ್ರಿಕ ಮಾಲೆ ಜೊತೆ ಸುದ್ದಿಗೊಷ್ಠಿ ನಡೆಸಿದ್ದ ವಿದೇಶಾಂಗ ಸಚಿವ ಜೈಶಂಕರ್, ದ್ವಿಪಕ್ಷೀಯ ಸಂಬಂಧವನ್ನು ಕೊಂಡಾಡಿದ್ದರು
=======
👉 ಏನಿದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ?
================
ಭಾರತವೂ ಸೇರಿದಂತೆ ವಿಶ್ವದ 193 ರಾಷ್ಟ್ರಗಳು ವಿಶ್ವಸಂಸ್ಥೆಯನ್ನು 1945ರಲ್ಲಿ ರೂಪಿಸಿದವು. ಎಲ್ಲಾ ರಾಷ್ಟ್ರಗಳ ಪ್ರಾತಿನಿಧಿಕ ಸಂಸ್ಥೆಯಾಗಿ ವಿಶ್ವಸಂಸ್ಥೆ ರಚಿಸಲು ನಿರ್ಧಾರವಾಗಿತ್ತು. ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಸಭೆ ಸೇರುತ್ತಾರೆ. ವಿಶ್ವಕ್ಕೆ ಸಂಬಂಧಿಸಿದ ಶಾಂತಿ, ಭದ್ರತೆ, ವಿಶ್ವಸಂಸ್ಥೆಗೆ ಹೊಸ ರಾಷ್ಟ್ರಗಳ ಸೇರ್ಪಡೆ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಎಲ್ಲಾ ಅಂಶಗಳನ್ನು ಮಂಡಿಸಿ ಚರ್ಚಿಸಲಾಗುತ್ತದೆ. ನಮ್ಮ ವಿಧಾನಸಭೆ, ಸಂಸತ್‌ನಲ್ಲಿ ಮೂರನೇ ಎರಡರಷ್ಟು ಅಂಶದಷ್ಟು ಮತ ಬಂದಂತೆ ಅಲ್ಲಿಯೂ ಕೂಡ ಯಾವುದೇ ಅಂಶ ಮಂಡನೆಯಾಗಿ ಅನುಮೋದನೆಗೊಳ್ಳಬೇಕಾದರೆ ಅದೇ ಮಾದರಿ ಅನುಸರಿಸಲಾಗುತ್ತದೆ.
========
🌷 NOTE
======
👉 ಕನ್ನಡದಲ್ಲಿ ಮಾತನಾಡಿದ್ದ ಅನಂತಕುಮಾರ್‌
ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ವಿಶ್ವಸಂಸ್ಥೆಯ 67ನೇ ಸಾಮಾನ್ಯ ಅಧಿವೇಶನದಲ್ಲಿ , ಅಂದರೆ 2012 ಅ.15ರಂದು ಕನ್ನಡದಲ್ಲಿ ಮಾತನಾಡಿ ದಾಖಲೆ ನಿರ್ಮಿಸಿದ್ದರು.

👉 ಭಾರತ ಮತ್ತು ಸಾಮಾನ್ಯ ಅಧಿವೇಶನ
1947 48ರ ಬಳಿಕ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಲು ಆರಂಭಿಸಿತು. ವರ್ಣಬೇಧ ನೀತಿ, ವಸಾಹತುಶಾಹಿ ನೀತಿ ವಿರುದ್ಧ ಧ್ವನಿಯೆತ್ತಲು ಆರಂಭಿಸಿತು.

👉 1953ರಲ್ಲಿ ದೇಶದ ನಾಯಕಿ ವಿಜಯಲಕ್ಷ್ಮೀ ಪಂಡಿತ್‌ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಅವರು 8ನೇ ಅಧ್ಯಕ್ಷೆ.

👉 1946ರಲ್ಲಿ ಬೆಲ್ಜಿಯಂನ ಪೌಲ್‌ ಹೆನ್ರಿ ಸ್ಪಾಕ್‌ ಮೊದಲ ಅಧ್ಯಕ್ಷರಾಗಿದ್ದರು.

👉 1942 ಜ.1 “ವಿಶ್ವಸಂಸ್ಥೆ’ ಅಥವಾ “ಯುನೈಟೆಡ್‌ ನೇಷನ್ಸ್‌’ ಎಂಬ ಹೆಸರು ಅಂಗೀಕಾರ

👉 1945 ಅ.24 ಅಧಿಕೃತವಾಗಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಇಂಗ್ಲಿಷ್‌ ಅಕ್ಷರ ಮಾಲೆಗೆ ತಕ್ಕಂತೆ ಅಲ್ಲಿ ರಾಷ್ಟ್ರಗಳಿಗೆ ಆಸನ ಒದಗಿಸಲಾಗುತ್ತದೆ.

Comments