ವಿಶ್ವ ಪರಿಸರ" ದಿನಾಚರಣೆ
👉 ಶನಿವಾರ ಜೂನ್-5ರ ವಿಶೇಷತೆ
🌍 "ವಿಶ್ವ ಪರಿಸರ" ದಿನಾಚರಣೆ
(World Environment Day)
======================
ಪ್ರತಿಯೊಂದು ಸಂಪನ್ಮೂಲಕ್ಕೂ ಮಾನವರು ಪ್ರಕೃತಿಯ ಮೇಲೆ ಅವಲಂಬಿತರಾಗಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ಪರಿಣಾಮವೇ ನಮ್ಮ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಏರು-ಪೇರು. ಪ್ರಸ್ತುತದಲ್ಲಿ ಜಾಗತಿಕ ತಾಪಮಾನ ಹಾಗೂ ಇತರ ರೋಗಗಳಿಂದ ಆಗುತ್ತಿರುವ ಹಾನಿಯನ್ನು ಎದುರಿಸಬೇಕಾಗುತ್ತಿದೆ. ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜೂನ್ 5ರಂದು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ.
============
ಈ ಸಂದರ್ಭದಲ್ಲಿ ನಾವು 47ನೇ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ.ವನಮಹೋತ್ಸವ ಎಂದೂ ಕರೆಯುವ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. 1974ರಿಂದ ಆಚರಿಸಲ್ಪಡುತ್ತಿರುವ ಪರಿಸರ ದಿನದಂದು ಪರಿಸರ ಕುರಿತು ಜಾಗೃತಿ ಮೂಡಿಸುವುದು, ಪರಿಸರವನ್ನು ಸಂರಕ್ಷಿಸುವ ಕಾರ್ಯಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ವಿಶ್ವಸಂಸ್ಥೆ ಹೊಂದಿದೆ.
===========
🍁 ವಿಶ್ವ ಪರಿಸರ ದಿನಾಚರಣೆ 2021 ರ ಥೀಮ್
“ಪರಿಸರ ವ್ಯವಸ್ಥೆಯ ಪುನರ್ಸ್ಥಾಪನೆ"
(Ecosystem Restoration)
- 2021 ರ ವಿಶ್ವ ಪರಿಸರ ದಿನಾಚರಣೆ ಆಥಿತ್ಯ(Host)ವನ್ನು ಪಾಕಿಸ್ತಾನ ವಹಿಸಿಕೊಳ್ಳಲಿದೆ.
- 1972 ರಲ್ಲಿ ಸಂಯುಕ್ತ ರಾಷ್ಟ್ರಗಳು ಆಯೋಜಿಸಿದ್ದ ವಿಶ್ವ ಪರಿಸರ ಸಮ್ಮೇಳನದಲ್ಲಿ ಚರ್ಚಿಸಿದ ನಂತರ, ಈ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
- 5 ಜೂನ್ 1974 ರಂದು ವಿಶ್ವದ ಪ್ರಥಮ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
- ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ Eco Day ಮತ್ತು World Environment Day (WED) ಎಂದು ಆಚರಣೆ ಮಾಡಲಾಗುತ್ತದೆ.
=========
🌷 ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು
==============
☘ ವಿಶ್ವ ಬೈಸಿಕಲ್ ದಿನ
- ಜೂನ್ 3ರಂದು ಪ್ರತೀ ವರ್ಷ ವಿಶ್ವ ಸೈಕಲ್ ದಿನವನ್ನು ಆಚರಿಸುತ್ತೇವೆ.
☘ ವಿಶ್ವ ಸಾಗರ ದಿನ
- ಜೂನ್ 17ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.
☘ ಮರಳುಗಾರಿಕೆ ಮತ್ತು
ಬರವನ್ನು ಎದುರಿಸಲು ವಿಶ್ವ ದಿನ
- ಜೂನ್ 17ರಂದು ಮರುಭೂಮೀಕರಣ ಮತ್ತು ಬರವನ್ನು ಎದುರಿಸಲು ವಿಶ್ವ ದಿನವೆಂದು ಆಚರಿಸಲಾಗುತ್ತದೆ.
☘ ವಿಶ್ವ ಮಳೆಕಾಡು ದಿನ
- ಮಳೆಕಾಡನ್ನು ರಕ್ಷಿಸಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮತ್ತು ಕ್ರಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಜೂನ್ 22ರಂದು ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.
🌍🌍🌍🌍🌍🌍
Comments