ಇಸ್ರೇಲ್‌ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ "ಐಸಾಕ್‌ ಹರ್ಜಾಗ್‌" ಆಯ್ಕೆ

ಇಸ್ರೇಲ್‌ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ "ಐಸಾಕ್‌ ಹರ್ಜಾಗ್‌" ಆಯ್ಕೆ
===============
ಹಿರಿಯ ರಾಜಕಾರಣಿ ಐಸಾಕ್‌ ಹರ್ಜಾಗ್‌ ಅವರು ಇಸ್ರೇಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಈ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ "ರೆವೆನ್‌ ರಿವ್‌ಲಿನ್" ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.
===============
60 ವರ್ಷದ ಹರ್ಜಾಗ್‌ ಅವರು ಇಸ್ರೇಲ್‌ನ ಪ್ರತಿಷ್ಠಿತ ಜಿಯೋನಿಸ್ಟ್‌ ಕುಟುಂಬಕ್ಕೆ ಸೇರಿದವರು. ಅವರ ತಂದೆ ಚೇಮ್‌ ಹರ್ಜಾಗ್‌ ಅವರು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿಯಾಗಿ, ನಂತರ ಇಸ್ರೇಲ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
=========

Comments