ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ 2020-21

🌷 ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ 2020-21: ಕೇರಳಕ್ಕೆ ಪ್ರಥಮ, ಬಿಹಾರಕ್ಕೆ ಕೊನೆಯ ಸ್ಥಾನ
===================
ಕೇಂದ್ರ ನೀತಿ ಆಯೋಗ ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ 2020-21ರ ವರದಿ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದು ಅಂತಿಮ ಸ್ಥಾನದಲ್ಲಿ ಬಿಹಾರ ರಾಜ್ಯವಿದೆ.
==============
ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿ ನಿಯತಾಂಕಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ (ಎಸ್‌ಡಿಜಿ) ಮೌಲ್ಯಮಾಪನ ಮಾಡಿದ್ದು, ಕೇರಳ ರಾಜ್ಯ 75 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು  ಎರಡೂ ರಾಜ್ಯಗಳು ತಲಾ 74 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಇನ್ನು ಪಟ್ಟಿಯಲ್ಲಿ ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅತ್ಯಂತ ಕೆಟ್ಟ ಪ್ರದರ್ಶನದೊಂದಿಗೆ ಅಂತಿಮ ಸ್ಥಾನಗಳಲ್ಲಿವೆ. 
==========
ಭಾರತದ ಎಸ್‌ಡಿಜಿ ಸೂಚ್ಯಂಕದ ಮೂರನೇ ಆವೃತ್ತಿ ಪ್ರಕ್ರಿಯೆಯನ್ನು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಗುರುವಾರ ಪ್ರಾರಂಭಿಸಿದರು.
===========
2018 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಸೂಚ್ಯಂಕವು ದೇಶದ ಎಸ್‌ಡಿಜಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ಸಾಧನವಾಗಿ ಮಾರ್ಪಟ್ಟಿದೆ. ಅಲ್ಲದೆ ಏಕಕಾಲದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಜಾಗತಿಕ ಗುರಿಗಳ ಮೇಲೆ ಸ್ಥಾನ ನೀಡುವ  ಮೂಲಕ ಸ್ಪರ್ಧೆಯನ್ನು ಬೆಳೆಸಿದೆ. ಭಾರತದಲ್ಲಿನ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಸೂಚ್ಯಂಕವು ಜಾಗತಿಕ ಗುರಿಗಳು ಮತ್ತು ಗುರಿಗಳನ್ನು ಪೂರೈಸುವತ್ತ ದೇಶದ ಪ್ರಯಾಣದಲ್ಲಿ ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಯನ್ನು ಈ ಸೂಚ್ಯಂಕವು ಅಳೆಯುತ್ತದೆ. 
ಇನ್ನು 2018-19ರಲ್ಲಿ ಮೊದಲ ಆವೃತ್ತಿಯು 13 ಸವಾಲುಗಳು, 39 ಗುರಿಗಳು ಮತ್ತು 62 ಸೂಚಕಗಳನ್ನು ಒಳಗೊಂಡಿದ್ದರೆ, ಎರಡನೇ ಆವೃತ್ತಿಯು 17 ಸವಾಲುಗಳು, 54 ಗುರಿಗಳು ಮತ್ತು 100 ಸೂಚಕಗಳನ್ನು ಮತ್ತು ಈ ಮೂರನೇ ಆವೃತ್ತಿಯು 17 ಗೋಲುಗಳು, 70 ಗುರಿಗಳು ಮತ್ತು 115 ಸೂಚಕಗಳನ್ನು ಒಳಗೊಂಡಿದೆ.
========
2030 ರ ವೇಳೆಗೆ 1730 ಗುರಿಗಳನ್ನು ಮತ್ತು 169 ಸಂಬಂಧಿತ ಗುರಿಗಳನ್ನು ಸಾಧಿಸುವ ಗುರಿ ಹೊಂದಲಾಗಿದೆ. 
========
🌷NITI Aayog ( National Institution for Transforming India)
================== 
- Founded : 1 January 2015 
- Preceding : Planning Commission
 ( 15 March 1950) 
- Headquarters : New Delhi 
- Chairperson : Narendra Modi 
- Vice Chairperson : Rajiv Kumar 
- CEO : Amitabh Kant
💐💐💐💐

Comments