ಬಸವಶ್ರೀ ಪ್ರಶಸ್ತಿ for 2019 and 2020
🌷 ಬಸವಶ್ರೀ ಪ್ರಶಸ್ತಿಗೆ ಹೆಸರು ಘೋಷಿಸಿದ ಡಾ. ಶಿವಮೂರ್ತಿ ಮುರುಘಾ ಶರಣರು
=================
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರನಾಥ್ ಹಾಗು ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಅವರು ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
=========
ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಬಸವ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಶರಣ, ಸಂತ ಹಾಗು ದಾರ್ಶನಿಕರ ಸ್ಮರಣೆ ಸಮಾರಂಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಹೆಸರನ್ನು ಘೋಷಿಸಿದರು.
========
2019ನೇ ಸಾಲಿಗೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರನಾಥ್ ಹಾಗು 2020ನೇ ಸಾಲಿಗೆ ಇಸ್ರೋ ಮಾಜಿ ಅಧ್ಯಕ್ಷ ಹಾಗು ಹೆಸರಾಂತ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
===========
ಡಾ. ಕೆ. ಕಸ್ತೂರಿರಂಗನ್: ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಖ್ಯಾತ ವಿಜ್ಞಾನಿಯಾಗಿದ್ದು, 2003ರವರೆಗೆ 9ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ರಾಜ್ಯಸಭಾ ಸದಸ್ಯರಾಗಿದ್ದರು. ಇದೀಗ ಭಾರತ ಸರ್ಕಾರದ ಯೋಜನಾ ಆಯೋಗದಲ ಸದಸ್ಯರಾಗಿದ್ದಾರೆ.
===========
ಡಾ ಕೆ. ಕಸ್ತೂರಿರಂಗನ್ ಅವರು 2003ರ ಆಗಸ್ಟ್ 27ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ 9 ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತುತ ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತುತ ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-2) ಮತ್ತು ಭಾರತೀಯ ದೂರಗ್ರಾಹಿ ಉಪಗ್ರಹಗಳು (ಐಆರ್‍ಎಸ್-1ಎ ಮತ್ತು 1ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿ/ಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-1 ಮತ್ತು 2ರ ಯೋಜನಾ ನಿರ್ದೇಶಕರಾಗಿದ್ದರು.
===========
ಚಂದ್ರಾಯಣ-1ರ ಅರ್ಥನಿರೂಪಣೆಗೆ ಕಾರಣವಾದ ವಿಸ್ತೃತ ಅಧ್ಯಯನಗಳ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರಯತ್ನಗಳು ಭಾರತವನ್ನು ಉತ್ಕøಷ್ಟ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯ ರಾಷ್ಟ್ರವಾಗಿ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಕೇವಲ 6ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತು. ಡಾ. ಕಸ್ತೂರಿರಂಗನ್ ಅವರ ಆಸಕ್ತಿಯಲ್ಲಿ ಹೆಚ್ಚು ಸಾಮಥ್ರ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಮತ್ತು ಆಪ್ಟಿಕಲ್ ಖಗೋಳ ವಿಜ್ಞಾನದಲ್ಲಿನ ಸಂಶೋಧನೆಯೂ ಒಳಗೊಂಡಿದೆ. ಅಲ್ಲದೆ, ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕೆಳಮಟ್ಟದವ ವಾತಾವರಣದಲ್ಲಿ ಕಾಸ್ಮಿಕ್ ಎಕ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ವಿಸ್ತೃತ ಮತ್ತು ಪ್ರಮುಖ ಕೊಡುಗೆಗಳನ್ನು ನೀಡಿದ್ದು, ಶ್ರೀಯುತರಿಗೆ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ – 1982, ಪದ್ಮಭೂಷಣ-1992 ಮತ್ತು ಪದ್ಮವಿಭೂಷಣ-2000 ಪ್ರಶಸ್ತಿಗಳು ಲಭಿಸಿವೆ.
==========
Comments