ನಮ್ಮ ಮೆದುಳು
🌺🌺ನಮ್ಮ ಮೆದುಳಿನ ಬಗ್ಗೆ ಮಾಹಿತಿ :🌺🌺
ಮಿದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ. ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ದಿಷ್ಟ ಭಾಗಗಳನ್ನು ಕಾಣಬಹುದು. ಅವು
1)ಮುಮ್ಮೆದುಳು
2) ಮಧ್ಯ ಮೆದುಳು
3) ಹಿಮ್ಮೆದುಳು
ಮಿದುಳಿನ ಹೊರನೋಟದ ಭಾಗಗಳು :-
1) ಮುಮ್ಮೆದುಳು (fore brain) :-
ಮುಮ್ಮೆದುಳು ಮಿದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್‌ಸೆಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ.
a) ಮಹಾಮಸ್ತಿಷ್ಕ (cerebrum) :-
# ಮಿದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ಧಿ ಹೊಂದಿದೆ.
# ಮೆದುಳಿನ ಒಟ್ಟು ತೂಕದ ಸುಮಾರು ಶೇ.80 ರಷ್ಟು ತೂಕ ಇದರದು.
# ಇದರ ಮೇಲ್ಮೈಯು ವಕ್ರವಾಗಿ ಅನೇಕ ಮಡಿಕೆಗಳಿಂದ ಕೂಡಿದೆ.
# ಮಹಾಮಸ್ತಿಷ್ಕದಲ್ಲಿ ಎರಡು ಅರ್ಧ ಸಮಗೋಳಗಳಿವೆ, - ಅವು ಬಲ ಗೋಳಾರ್ಧ ಮತ್ತು ಎಡ ಗೋಳಾರ್ಧ.
# ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು "ಕಾರ್ಪಸ್ ಕಲೋಸಮ್" ಎಂಬ ನರಗಳ ಎಳೆಯಿಂದ ಸೇರ್ಪಡೆಯಾಗಿದೆ.
# ದೇಹದ ಎಡಭಾಗದಿಂದ ಬರುವ ನರಗಳು ಮಹಾಮಸ್ತಿಷ್ಕದ ಬಲಗೋಳಾರ್ಧಕ್ಕೆ ಸಂಪರ್ಕ ಹೊಂದಿವೆ.
# ದೇಹದ ಬಲ ಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡಗೋಳಾರರ್ಧಕ್ಕೆ ಸಂಪರ್ಕಗೊಂಡಿವೆ.
# ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್ (ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ)
# ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು (ಆಕ್ಸಾನ್ ಮತ್ತು ಡೆಂಡ್ರೈಟ್ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ)
# ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ ನ ವಿಸ್ತೃತ ಬೆಳವಣಿಗೆಯೇ ಕಾರಣ.
b) ಡೈಎನ್‌ಸೆಫೆಲಾನ್ :-
# ಡೈಎನ್‌ಸೆಫೆಲಾನ್ ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಚಿಕ್ಕ ಭಾಗ.
# ಡೈಎನ್‌ಸೆಫೆಲಾನ್ ನಲ್ಲಿ "ಥಲಾಮಸ್ ಮತ್ತು ಹೈಪೋಥಲಾಮಸ್ ಎಂಬ ಎರಡು ಭಾಗಗಳಿವೆ.
# ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ ಗೆ ಕಳುಹಿಸುತ್ತದೆ.
# ಹೈಪೋಥಲಾಮಸ್ ದೇಹದ ಉಷ್ಣತೆ, ದೇಹದ ಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುತ್ತದೆ.
2) ಮಧ್ಯ ಮಿದುಳು (Mid brain) :-
# ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕ ಭಾಗ.
# ಮಧ್ಯಮಿದುಳು ಮುಮ್ಮೆದಳು ಮತ್ತು ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ.
# ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಇದು ಕಾರಣ.
3) ಹಿಮ್ಮೆದುಳು (Hind brain) :-
# ಹಿಮ್ಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ್ ಎಂಬ ಮೂರು ಭಾಗಗಳಿವೆ.
a) ಅನುಮಸ್ತಿಷ್ಕ (Cerebellum) :-
# ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.
# ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ಮತ್ತು ದೇಹದ ಸಮತೋಲನವನ್ನು ಕಾಪಾಡುತ್ತದೆ.
b) ಪಾನ್ಸ್ (Pons) :-
# ಪಾನ್ಸ್ ಅನುಮಸ್ತಿಷ್ಕದ ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟದ ಮೇಲೆ ಇದೆ.
# ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
c) ಮೆಡುಲ್ಲಾ ಅಬ್ಲಾಂಗೇಟ್ (Medulla oblongata) :-
# ಮೆಡುಲ್ಲಾ ಅಬ್ಲಾಂಗೇಟ್ ಮೆದುಳಿನ ಅತಿ ಹಿಂದಿನ ಭಾಗವಾಗಿದ್ದು ,ಮುಂಡದ ಭಾಗದಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುತ್ತದೆ.
# ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ಜೀರ್ಣನಾಳದ ಚಲನೆಗಳನ್ನು ನಿಯಂತ್ರಿಸುತ್ತದೆ ಜೊತೆಗೆ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳನ್ನು ಸಂಬಂಧಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
ನೆನಪಿರಲಿ :-✍️✍️✍️🌹
# ವಯಸ್ಕ ಮಾನವನ ಮಿದುಳಿನ ಸರಾಸರಿ ತೂಕ ಸುಮಾರು 1200 ರಿಂದ 1400ಗ್ರಾಂಗಳು.
# ಮಾನವನ ಮಿದುಳು ಆತನ ದೇಹದ ತೂಕದ ಶೇ.1.9ರಷ್ಟು ಇರುತ್ತದೆ.
# ದೇಹಕ್ಕೆ ಬೇಕಾದ ಒಟ್ಟು ರಕ್ತದ ಸರಬರಾಜಿನಲ್ಲಿ ಶೇ.20 ರಷ್ಟು ಮಿದುಳಿಗೆ ಬೇಕಾಗುತ್ತದೆ.ವಿಜಯಶಾಲಿ
✍✍✍📕📕📕📕📕📕📕
Comments