ಪ್ರಮುಖ ಸಮಿತಿಗಳ ಮಾಹಿತಿ
ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಸಮಿತಿಗಳ ಮಾಹಿತಿ..
* ಬಲವಂತರಾಯ್ ಮೆಹ್ತಾ ಸಮಿತಿ - 1957 ಮೂರು ಹಂತದ ಪಂಚಾಯತ್ ಸ್ಥಾಪನೆಗೆ ಶಿಫಾರಸ್ಸು.
* ಕೆ.ಸಂತಾನಂ ಸಮಿತಿ - 1963 ಪಂಚಾಯತ್ ಗಳಿಗೆ ಆರ್ಥಿಕ ಸಹಾಯ ನೀಡಲು ಸಲಹೆ.
* ಅಶೋಕ ಮೆಹ್ತಾ ಸಮಿತಿ - 1978 ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಶಿಫಾರಸ್ಸು.
* ಧಾರ್ ಆಯೋಗ - 1948 ಇದು ಎಸ್.ಕೆ. ಧಾರ್ ನೇತೃತ್ವದ ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿದ ಮೊದಲ ಆಯೋಗ.
* ಜೆವಿಪಿ ಸಮಿತಿ - 1949 ಇದು ಕೂಡಾ ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿದ ಎರಡನೇ ಆಯೋಗ.
ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಪಟ್ಟಾಭಿ ಸೀತಾರಾಮಯ್ಯ ಇದರ ಸದಸ್ಯರಾಗಿದ್ದರು.
ಈ ಸಮಿತಿಗೆ ಅಧ್ಯಕ್ಷರು ಯಾಕೆ ಇರಲಿಲ್ಲ ಅಂದ್ರೆ ಇವರೆಲ್ಲರೂ ಸಮಾನ ಮನಸ್ಕರು ಆಗಿದ್ದರಿಂದ.
* ಫಜಲ್ ಅಲಿ ಸಮಿತಿ - 1953 ಇದು ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿದ ಮೂರನೇ ಆಯೋಗವಾಗಿದೆ.
ಅಧ್ಯಕ್ಷರು - ಫಜಲ್ ಅಲಿ
ಸದಸ್ಯರು - ಏಚ್.ಎನ್. ಕುಂಜ್ರು, ಕೆ.ಎಂ ಫಣ್ಣಿಕ್ಕರ್.
* ಜಿವಿಕೆ.ರಾವ್ ಸಮಿತಿ - 1985 ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಂಡಿರುವುದನ್ನ Grass Without Root ಎಂದು ಪ್ರಸ್ತಾಪಿಸಿ ಶಿಫಾರಸ್ಸು ಮಾಡಿತ್ತು.
* ಮಾಧವ್ ಗಾಡ್ಗೀಲ ಸಮಿತಿ ( 2010 ) ಕೆ.ಕಸ್ತೂರಿರಂಗನ್ ಸಮಿತಿ ( 2011 )
ಡಾಕ್ಟರ್ ಚಂದ್ರಶೇಖರನ್ ಸಮಿತಿ - ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದೆ.
* ಬೀ. ಶಿವರಾಮನ್ ಸಮಿತಿ - 1982 ನಬಾರ್ಡ್ ಬ್ಯಾಂಕ್ ಸ್ಥಾಪನೆಗೆ ಸಂಬಂಧಿಸಿದೆ.
* ಆರ್.ಜಿ. ಸರಯ್ಯ ಸಮಿತಿ - 1972 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಗೆ ಸಂಬಂಧಿಸಿದೆ.
* ಜಸ್ಟೀಸ್ ಮಿಲ್ಲರ್ ಸಮಿತಿ - 1918- 1919 ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದೆ.
* ಸಾಚಾರ್ ಸಮಿತಿ - 2006 ಮುಸ್ಲಿಮರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲು ನೇಮಕ.
* ರಾಜೇಂದ್ರ ಸರ್ಕಾರಿಯಾ ಆಯೋಗ - 1983 ಕೇಂದ್ರ ರಾಜ್ಯಗಳ ನಡುವಿನ ಸಂಬಂಧಗಳ ಸುಧಾರಣೆಗೆ ಸಂಬಂಧಿಸಿದೆ.
* ಸರ್ದಾರ್ ಸ್ವರ್ಣ ಸಿಂಗ್ ಸಮಿತಿ - 1976 ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲು ಶೀಪಾರಸ್ಸು ಮಾಡಿದ ಸಮಿತಿ.
* ದಿನೇಶ್ ಗೋಸ್ವಾಮಿ ಸಮಿತಿ ಮತ್ತು ತಾರ್ಕುಂಡೇ ಸಮಿತಿ - ಚುನಾವಣಾ ಸುಧಾರಣೆಗೆ ಸಂಬಂಧಿಸಿದೆ.
* ರಾಯಲ್ ಕಮಿಷನ್ - ಕೇಂದ್ರ ಲೋಕಸೇವಾ ಆಯೋಗ ಸ್ಥಾಪನೆಗೆ ಶಿಫಾರಸ್ಸು.
* ಹಿಲ್ಟನ್ ಯಂಗ್ ಸಮಿತಿ - ಆರ್ ಬಿಐ ಸ್ಥಾಪನೆಗೆ ಸಂಬಂಧಿಸಿದೆ.
* ಮಂಡಲ್ ಆಯೋಗ - ಮಂಡಲ್ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಅಧ್ಯಯನ ಮಾಡಲು ನೇಮಕ.
* ಫೆರವಾನ್ ಸಮಿತಿ - ರಾಷ್ಟೀಯ ಷೇರು ವಿನಿಮಯ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದೆ.
* ಕಾಕಾ ಕೆಲ್ಕರ್ ಆಯೋಗ - ಕೆಲ್ಕರ ನೇತೃತ್ವದಲ್ಲಿ ಭಾರತದ ಮೊದಲ ಹಿಂದುಳಿದ ಆಯೋಗ.
* ಇಂದ್ರಜಿತ್ ಗುಪ್ತಾ ಸಮಿತಿ - ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮಿತಿ.
* ವೈಟ್ಲಿ ಆಯೋಗ - ಕಾರ್ಮಿಕರ ಕಲ್ಯಾಣ ಕ್ಕೇ ಸಂಬಂಧಿಸಿದೆ.
* ಒಡೆಯರ್ ವರದಿ - ಕನ್ನಡ ವಿವಿ ಯ ಸ್ವರೂಪದ ನಿರ್ಧಾರಕ್ಕೆ.
* ವೈ.ವೀ ರೆಡ್ಡಿ ಆಯೋಗ - ಕೇಂದ್ರದ ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು 2015-2020
* ಎನ್.ಕೆ.ಸಿಂಗ್ ಆಯೋಗ - ಕೇಂದ್ರದ ಹದಿನೈದನೇ ಹಣಕಾಸು ಆಯೋಗ ಅವಧಿ - 2021 ಏಪ್ರಿಲ್ 01 ರಿಂದ 2026 ಮಾರ್ಚ್ 31 ರವರೆಗೆ ನೇಮಕ.
* ಎಲ್. ಎಂ. ಸಿಂಗ್ವೀ ಆಯೋಗ - ಅನಿವಾಸಿ ಭಾರತೀಯರಿಗೇ ದ್ವಿ ಪೌರತ್ವ ಶಿಫಾರಸ್ಸು ಮಾಡಿದ ಆಯೋಗ.
* ಅಚಿಸನ್ ಸಮಿತಿ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಶಿಫಾರಸ್ಸು.
* 1945ರ ಸಪ್ರು ವರದಿ - ಮೂಲಭೂತ ಹಕ್ಕುಗಳನ್ನು ಒದಗಿಸಲು ಶಿಫಾರಸ್ಸು.
* ಆರ್.ಎನ್.ಮಲ್ಹೋತ್ರಾ ಸಮಿತಿ - ವಿಮಾ ಸಂಸ್ಥೆ ( IRDAI ) ಸ್ಥಾಪನೆಗೆ ಶಿಫಾರಸ್ಸು.
* ಮೊದಲ ಆಡಳಿತ ಸುಧಾರಣಾ ಆಯೋಗ - ಮೊರಾರ್ಜಿ ದೇಸಾಯಿ ನೇತೃತ್ವ 1966.
* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನ ಗಳ ವಿಲೀನಕ್ಕೆ.
* ಎಂ.ಎನ್.ವೆಂಕಟಾಚಲಯ್ಯ ಸಮಿತಿ - 2002 ಸಂವಿಧಾನ ಪರಾಮರ್ಶೆ ಆಯೋಗ.
* ವೈ.ಕೆ. ಅಲಘ ಸಮಿತಿ - 2000-01 ನಾಗರಿಕ ಸೇವಾ ಪರೀಕ್ಷೆಗಳ ಸುಧಾರಣೆಗೆ.
* ವರದರಾಜನ್ ಸಮಿತಿ - ಭೂಪಾಲ್ ಅನಿಲ ದುರಂತದ ತನಿಖೆಗೆ.
* ಲಿಬರಾನ್ ಆಯೋಗ - ಅಯೋಧ್ಯಾ ಬಾಬ್ರಿ ಮಸೀದಿ ಧ್ವಂಸದ ವಿಚಾರಣೆಗೆ.
Comments