ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

👉ದಾದಾ ಸಾಹೇಬ್ ಫಾಲ್ಕೆ ಅವರು ಭಾರತೀಯ ಸಿನಿರಂಗದ ಪಿತಾಮಹ ಎಂದೇ ಪರಿಗಣಿಸಲ್ಪಟ್ಟಿದ್ಧಾರೆ. 1913ರಲ್ಲಿ ಭಾರತದ ಮೊದಲ ಸಿನಿಮಾದಲ್ಲಿ ಅವರು ನಟಿಸಿದ್ದರು. 

👉ಅವರ ಹೆಸರಿನಲ್ಲಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಸಿನಿಮಾ ರಂಗದ ಅತ್ಯುಚ್ಛ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. 

👉ಒಟ್ಟಾರೆ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಸ್ವರ್ಣ ಕಮಲ ಪದಕ ಹಾಗೂ 10 ಲಕ್ಷ ರೂ ನಗದು ಬಹುಮಾನ ಒಳಗೊಂಡಿರುತ್ತದೆ.

👉ದಾದಾಸಾಹೇಬ್ ಫಾಲ್ಕೆ ಹೆಸರಿಲ್ಲಿ ಭಾರತ 1969ರಿಂದ ಪ್ರಶಸ್ತಿ ನೀಡುತ್ತಿದೆ. 

👉2019ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಗೆ ರಚನೆಯಾಗಿದ್ದ ಸಮಿತಿಯಲ್ಲಿ ಆಶಾ ಭೋಂಸ್ಲೆ, ಸುಭಾಷ್ ಘಾಯ್, ಮೋಹನ್ ಲಾಲ್, ಶಂಕರ್ ಮಹದೇವನ್ ಮತ್ತು ಬಿಸ್ವಜೀತ್ ಚಟರ್ಜಿ ಅವರಿದ್ದರು. 

👉ಹಂದಿನ ಸಾಲಿನ ಪ್ರಶಸ್ತಿಯನ್ನು ಅಮಿತಾಭ್ ಬಚ್ಚನ್ ಅವರಿಗೆ ನೀಡಲಾಗಿತ್ತು.(2018)

👉ದೇವಿಕಾ ರಾಣಿ ಈ ಪ್ರಶಸ್ತಿಯ ಮೊದಲ ವಿಜೇತೆ

👉ಕನ್ನಡದ ಮೇರು ನಟ ಡಾ.ರಾಜ್‍ಕುಮಾರ್ ಅವರಿಗೆ 1995ರಲ್ಲಿ ಫಾಲ್ಕೆ ಪ್ರಶಸ್ತಿ ಪ್ರದಾನವಾಗಿದೆ

👉ರಜನಿಕಾಂತ್ ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗಕ್ಕೆ ಕಾಲಿಟ್ಟ ಅವರು ಕ್ರಮೇಣ ತಮಿಳುನಾಡಿನಲ್ಲಿ ಪ್ರಖ್ಯಾತ ನಟರಾಗಿ ಇಂದು ತಲೈವ ಆಗಿದ್ದಾರೆ


Comments

Popular Posts