ಕೊನೆಗೂ ನಾಡಾ ವ್ಯಾಪ್ತಿಗೆ ಬಿಸಿಸಿಐ
👉🏏 ಕೊನೆಗೂ ನಾಡಾ ವ್ಯಾಪ್ತಿಗೆ ಬಿಸಿಸಿಐ
===============
ಹಲವು ವರ್ಷಗಳಿಂದ ಡೋಪಿಂಗ್ ಬಗ್ಗೆ ಅಸಡ್ಡೆ ತೋರಿಸುತ್ತಲೇ ಬಂದಿದ್ದ ಭಾರತೀಯ ಕ್ರಿಕೆಟ್ನ ಆಡಳಿತ ಮಂಡಳಿ ಬಿಸಿಸಿಐ, ಕೊನೆಗೂ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ (ನಾಡಾ) ವ್ಯಾಪ್ತಿಗೆ ಬರಲು ಒಪ್ಪಿಗೆ ಸೂಚಿಸಿದೆ. ಶುಕ್ರವಾರ ಕೇಂದ್ರ ಕ್ರೀಡಾ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಇದು ನಿರ್ಧಾರವಾಗಿದೆ. ನಾಡಾದ ವ್ಯಾಪ್ತಿಗೆ ಬರುವುದರೊಂದಿಗೆ ಬಿಸಿಸಿಐ, ಆರ್ಥಿಕ ಸ್ವಾಯತ್ತತೆಯ ಹೊರತಾಗಿಯೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್) ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
==================
==================
👉✍ ಎಲ್ಲರಿಗೂ ಪರೀಕ್ಷೆ:
================
ನಾಡಾ ಸಂಸ್ಥೆಯು ವಿಶ್ವ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆಯ (ವಾಡಾ) ನಿಯಮಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆ ನಿಗದಿ ಮಾಡಿರುವ ಮಾನದಂಡಗಳೆಲ್ಲವು ಇನ್ನು ಕ್ರಿಕೆಟಿಗರಿಗೂ ಅನ್ವಯವಾಗಲಿದೆ. ಪ್ರತಿಯೊಬ್ಬ ಆಟಗಾರನೂ ಪರೀಕ್ಷೆ ನಡೆಸಲು ಲಿಖಿತ ಒಪ್ಪಿಗೆಯೊಂದನ್ನು ನಾಡಾಗೆ ಸಲ್ಲಿಸಬೇಕಾಗುತ್ತದೆ. ಮೂರು ದಿನಾಂಕಗಳನ್ನು ಸೂಚಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುತ್ತದೆ. ಅಲ್ಲದೆ, ಅಧಿಕಾರಿಗಳು ಹೇಳಿದ ಸಮಯಕ್ಕೆ ಆಟಗಾರರು ಹಾಜರಾಗಿ ಸ್ಯಾಂಪಲ್‌ಗಳನ್ನೂ ನೀಡಬೇಕಾಗುತ್ತದೆ. ಇದರ ಜತೆಗೆ ಕ್ರಿಕೆಟ್ ಟೂರ್ನಿಯೊಂದು ನಡೆಯುವಲ್ಲಿಗೆ ನಾಡಾ ಅಧಿಕಾರಿಗಳು ಭೇಟಿ ನೀಡಿ ಪರೀಕ್ಷೆ ಮಾಡಬಹುದು.
================
👉 ಆರ್‌ಟಿಐ ವ್ಯಾಪ್ತಿ:
================
ಹೊಸ ಬದಲಾವಣೆ ಬಿಸಿಸಿಐಯನ್ನು ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಪರಿವರ್ತಿಸಿದೆ. ಇದು ಕ್ರಿಕೆಟ್ ಸಂಸ್ಥೆಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಗೆ ತಂದಿದ್ದು, ಸಾರ್ವಜನಿಕರು ಕೂಡ ಆಡಳಿತ ನಿರ್ವಹಣೆ ಕುರಿತು ತಿಳಿದುಕೊಳ್ಳಬಹುದು
==================
👉✍ ಏನೇನು ಹೊಸ ಬದಲಾವಣೆ?
==================
# ಕ್ರೀಡಾ ಸಚಿವಾಲಯದ ಸೂಚನೆಯಂತೆ ಒಪ್ಪಿಗೆ ಕೊಟ್ಟ ಬಿಸಿಸಿಐ
# ನಾಡಾ ನಿಯಮಗಳ ಪ್ರಕಾರ ಕ್ರಿಕೆಟಿಗರಿಗೆ ಉದ್ದೀಪನಾ ಮದ್ದು ನಿಗ್ರಹ ಪರೀಕ್ಷೆ
# ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬದಲಾದ ಬಿಸಿಐಐ
# ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯೆನ್ನುವ ಪ್ರಖ್ಯಾತಿ ಪಡೆದಿರುವ ಬಿಸಿಸಿಐ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಮಾರ್ಪಾಡಾಗಿದ್ದು, ಆರ್‌ಟಿಐ ಕಾಯಿದೆಗೂ ಒಳಪಡಲಿದೆ.
# ಭಾರತೀಯ ಕ್ರಿಕೆಟಿಗರಿಗೆ ಇನ್ನು ಮುಂದೆ ನಾಡಾ ಅಧಿಕಾರಿಗಳೇ ಉದ್ದೀಪನಾ ಮದ್ದು ಪರೀಕ್ಷೆ ನಡೆಸಲಿದ್ದಾರೆ.
# ಮಾಹಿತಿ ಹಕ್ಕಿನಡಿ ಬಿಸಿಸಿಐನ ಆಡಳಿತದ ಮೇಲೆ ಸಾರ್ವಜನಿಕರಿಗೆ ಹಿಡಿತ
==================
👉✍ ನಾಡಾದ ಪ್ರಧಾನ ನಿರ್ದೇಶಕ ನವೀನ್ ಅಗರ್ವಾಲ್
=================
Comments