ರೆಪೋ ದರ



👉🌹 35 ಬೇಸಿಸ್ ಅಂಕಗಳಷ್ಟು ರೆಪೋ ದರ ಕಡಿತಗೊಳಿಸಿದ ಆರ್‌ಬಿಐ
=================
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಕಡಿತಗೊಳಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಆರ್ಥಿಕ ನೀತಿ ಸಮಿತಿ ಇಂದು 35 ಬೇಸಿಸ್ ಅಂಕಗಳಷ್ಟು ಅಥವಾ 0.35% ರೆಪೋ ದರವನ್ನು ಇಳಿಕೆ ಮಾಡಿದೆ.
ಇದರಿಂದ ಶೇ. 5.75ರಷ್ಟಿದ್ದ ರೆಪೋದರ 5.40 ಮತ್ತು ರಿವರ್ಸ್ ರೆಪೊ ದರವನ್ನು 5.50 ಪ್ರತಿಶತದಿಂದ 5.15 ಕ್ಕೆ ಇಳಿಸಲಾಗಿದೆ. ಈ ವರ್ಷ ಇಲ್ಲಿಯವರೆಗೆ, ರೆಪೊ ದರವನ್ನು ಶೇಕಡಾ 1.10 ರಷ್ಟು ಕಡಿತಗೊಳಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿಯೇ ಇದು ಅತ್ಯಂತ ಕಡಿಮೆ ರೆಪೋ ದರವಾಗಿದೆ.
=================
👉🌹 ರೆಪೋ ದರ ಎಂದರೇನು?
===============
ಆರ್​ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.
================

Comments

Popular Posts