ಭಾರತ ರತ್ನ

ಮಾಹಿತಿ ವೇದಿಕೆ

👉🌹 ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ಭಾರತ ರತ್ನ ಪ್ರದಾನ
=================
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನವನ್ನು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್​ ಮುಖರ್ಜಿ, ಜನಸಂಘದ ಮುಖಂಡ ನಾನಾಜಿ ದೇಶ್​ಮುಖ್​ (ಮರಣೋತ್ತರ) ಹಾಗೂ ಹಿರಿಯ ಸಂಗೀತಗಾರ ಭೂಪೇನ್​ ಹಝಾರಿಕಾ (ಮರಣೋತ್ತರ) ಅವರಿಗೆ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಿದರು.
=================
👉🌹 ಪ್ರಣಬ್ ಮುಖರ್ಜಿ
===============
✍ ಜನನ: 1935ರ ಡಿ.11
✍ ಜನ್ಮಸ್ಥಳ: ಪಶ್ಚಿಮಬಂಗಾಳದ ಮಿರಾತಿ
✍ ಹುದ್ದೆ: ರಾಷ್ಟ್ರಪತಿ, ಹಣಕಾಸು ಸಚಿವ, ವಿದೇಶಾಂಗ ಸಚಿವ, ರಕ್ಷಣಾ ಸಚಿವ, ಲೋಕಸಭಾ ಹಾಗೂ ರಾಜ್ಯಸಭಾ ನಾಯಕ
===================
✍ ಪರಿಚಯ:
================
ಕಾಂಗ್ರೆಸ್​ನ ಪ್ರಭಾವಿ ಮುಖಂಡರಲ್ಲೊಬ್ಬರಾಗಿದ್ದ ಪ್ರಣಬ್ ಮುಖರ್ಜಿ, ರಾಜಕೀಯ ವಲಯದಲ್ಲಿ ‘ಪ್ರಣಬ್​ದಾ’ ಎಂದೇ ಪರಿಚಿತರು. ಎರಡು ಬಾರಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಅವರು, 2012ರಿಂದ 5 ವರ್ಷಗಳ ಕಾಲ ಭಾರತದ ರಾಷ್ಟ್ರಪತಿಯಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವರಾಗಿದ್ದರು. ಸದ್ಯ ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ ವಿಶ್ರಾಂತಿ ಜೀವನದಲ್ಲಿದ್ದಾರೆ.
================
👉🌹 ನಾನಾಜಿ ದೇಶಮುಖ್
=================
✍ ಜನನ: 1916ರ ಅ.11
✍ ನಿಧನ: 2010ರ ಫೆ.27
✍ ಜನ್ಮಸ್ಥಳ: ಮಹಾರಾಷ್ಟ್ರದ ಕಡೋಲಿ
✍ ಹುದ್ದೆ: ಆರ್​ಎಸ್​ಎಸ್ ಪ್ರಚಾರಕ, ಜನಸಂಘದ ಕಾರ್ಯದರ್ಶಿ
=================
✍ ಪರಿಚಯ:
=================
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ನಾನಾಜಿ, ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಉತ್ತರಪ್ರದೇಶದಲ್ಲಿ ಆರ್​ಎಸ್​ಎಸ್ ಪ್ರಚಾರಕರಾಗಿದ್ದ ಅವರು, ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು. ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ರಾಜಕೀಯವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡಿದ್ದರು. ತುರ್ತು ಪರಿಸ್ಥಿತಿ ದಿನಗಳಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 1999ರಿಂದ 2005ರವರೆಗೆ ಎನ್​ಡಿಎ ಸರ್ಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ರಾಜಕೀಯದಿಂದ ನಿವೃತ್ತರಾದ ಬಳಿಕ ದೀನ್​ದಯಾಳ್ ಸಂಶೋಧನಾ ಸಂಸ್ಥೆ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡರು.
==================
👉🌹 ಭೂಪೇನ್ ಹಝಾರಿಕಾ
=================
✍ ಜನನ: 1926ರ ಸೆ.8
✍ ನಿಧನ: 2011ರ ನ.5
✍ ಜನ್ಮಸ್ಥಳ: ಅಸ್ಸಾಂನ ಸಾದಿಯಾ
✍ ಹುದ್ದೆ: ಗಾಯಕ, ಸಂಗೀತಗಾರ, ಕವಿ, ಚಿತ್ರ ನಿರ್ಮಾಪಕ
===============
✍ ಪರಿಚಯ:
================
ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಇವರು ಅಸ್ಸಾಮಿ ಸಂಗೀತದಲ್ಲಿ ಮೇರುಹೆಸರು. ಅಸ್ಸಾಂ ಜಾನಪದವನ್ನು ದೇಶಕ್ಕೆ ಪರಿಚಯಿಸಿದ ಹಝಾರಿಕಾ ಅವರು ಸುಧಾಕಾಂತ್ ಎಂದು ಚಿರಪರಿಚಿತರು. ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು.
=================

Comments