ಶ್ರೀ ಪಿಂಗಾಲಿ ವೆಂಕಯ್ಯ

ಮಾಹಿತಿ ವೇದಿಕೆ

👉🌹 ಇವತ್ತು ರಾಷ್ಟ್ರಧ್ವಜ ವಿನ್ಯಾಸಕಾರ ಪಿಂಗಾಲಿ ವೆಂಕಯ್ಯ ಹುಟ್ಟಿದ ದಿನ, ಅವರ ಬಗ್ಗೆ ನಿಮಗೆಷ್ಟು ಗೊತ್ತು?!
==================
ಇಂದು ದೇಶ ಕಂಡ ಒಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ನಮ್ಮ ರಾಷ್ಟ್ರಧ್ವಜದ ವಿನ್ಯಾಸಕರಾದ ಶ್ರೀ ಪಿಂಗಾಲಿ ವೆಂಕಯ್ಯ ಅವರ ಜನ್ಮ ದಿನಾಚರಣೆ. ಈ ಹಿನ್ನೆಲೆ ಕೇಂದ್ರ ರೇಲ್ವೆ ಸಚಿವ ಪಿಯೂಷ್​​ ಗೋಯಲ್ ಟ್ವೀಟ್​ ಮಾಡಿ ವೆಂಕಯ್ಯ ಅವರನ್ನ ಸ್ಮರಿಸಿದ್ದಾರೆ​. ನಮ್ಮ ದೇಶಕ್ಕೆ  ವೆಂಕಯ್ಯ ಅವರ ಕೊಡುಗೆ ಅಪಾರವೆಂದು ಟ್ವೀಟ್​ ಮಾಡಿದ್ದಾರೆ.
================
👉🙏 ಯಾರು ಈ ಪಿಂಗಾಲಿ ವೆಂಕಯ್ಯ?
================
ಇವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಮ್ಮ ದೇಶದ ತ್ರಿವರ್ಣ ಧ್ವಜದ ವಿನ್ಯಾಸಕರು. ನಾವಿಂದು ನೋಡುತ್ತಿರುವ ಧ್ವಜದ ಕಲ್ವನೆ ಕಂಡವರು ಹಾಗೂ ಅದನ್ನು ಕಾರ್ಯರೂಪಕ್ಕೆ ತಂದು ಜಗತ್ತಿನಾದ್ಯಂತ ಭಾರತ ಗುರುತಿಸಿಕೊಳ್ಳುವ ಹಾಗೇ ಮಾಡಿರುವ ವ್ಯಕ್ತಿ. ಇವರ ಜೀವನ ಹಾಗೂ ಇವರು ದೇಶಕ್ಕೆ ನೀಡಿದ ಕೊಡುಗೆ ಮಹತ್ವದ್ದು.
ವೆಂಕಯ್ಯನವರು 1876ರ ಆಗಸ್ಟ್​ 2ರಂದು ಆಂಧ್ರಪ್ರದೇಶದ ಕೃಷ್ಣ ಎಂಬ ಜಿಲ್ಲೆಯಲ್ಲಿ ಜನಿಸಿದರು. ಇವರೊಬ್ಬರು ಅಪ್ಪಟ ಗಾಂಧಿವಾದಿಯಾಗಿದ್ದರು.
==================
 ಆಫ್ರಿಕಾದಲ್ಲಿ ಆಂಗ್ಲೋ ಬೋಯರ್​​ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬ್ರಿಟಿಷ್​ ಸೈನ್ಯದ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಇವರು ಮೊದಲ ಬಾರಿ ಗಾಂಧೀಜಿಯನ್ನು ಭೇಟಿಯಾದದ್ದು ಇಲ್ಲಿಯೇ.
ಆಫ್ರಿಕಾದಿಂದ ಮರಳಿದ ಮೇಲೆ ಅವರು ತಮ್ಮ ಹೆಚ್ಚಿನ ಸಮಯವನ್ನು, ಹತ್ತಿ ಕೃಷಿಯಲ್ಲಿ ಹಾಗೂ ಅದರ ಹೊಸ ಪ್ರಯೋಗದಲ್ಲಿ ಕಳೆದರು. ಜೊತೆಗೆ ಲಾಹೋರಿನಲ್ಲಿ ಸಂಸ್ಕೃತ, ಉರ್ದು ಮತ್ತು ಜಪಾನಿ ಭಾಷೆಯನ್ನು ಕಲಿಯುತ್ತಿದ್ದರು. ಆಂಧ್ರಪ್ರದೇಶದ ಮಚಲಿಪಟ್ಟಣದ ನ್ಯಾಷನಲ್​ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
==================
1918ರಿಂದ 1921 ಅವಧಿಯಲ್ಲಿ ವೆಂಕಯ್ಯ ಧ್ವಜವನ್ನು ರಚಿಸುವುದರ ಬಗ್ಗೆ ಕಾಂಗ್ರೆಸ್​​ ಪಕ್ಷದ ಸಭೆಯೊಂದರಲ್ಲಿ ಪ್ರಸ್ತಾಪಿಸಿದರು. ಹಾಗೂ ಆ ಕಾರ್ಯದಲ್ಲಿ ಯಶಸ್ವಿಯಾದರು.
===============
 ವೆಂಕಯ್ಯನವರು ವಿಜಯವಾಡದಲ್ಲಿ ಮತ್ತೆ ಗಾಂಧೀಜಿಯನ್ನು ಭೇಟಿಯಾಗಿ ತಾವು ರಚಿಸಿದ ರಾಷ್ಟ್ರಧ್ವಜವನ್ನು ತೋರಿಸಿದರು. ಅವರು ಮೊದಲು ರಚಿಸಿದ ಧ್ವಜದಲ್ಲಿ ಕೇಸರಿ ಹಾಗೂ ಹಸಿರು ಬಣ್ಣಗಳನ್ನ ಮಾತ್ರ ಬಳಸಿದ್ದರು. ಇದನ್ಮು ಗಮನಿಸಿದ ಗಾಂಧೀಜಿ ಆ ಎರಡು ಬಣ್ಣಗಳೊಂದಿಗೆ ಶಾಂತಿ ಸಂಕೇತವಾಗಿ ಬಿಳಿ ಬಣ್ಣವನ್ನು ಸೇರಿಸುವಂತೆ ಸಲಹೆ ನೀಡಿದರು. ಇದಾದ ಬಳಿಕ ಲಾಲ ಹನ್ಸ್​ರಾಜ್​​ ನೀಲಿ ಬಣ್ಣದ ಧರ್ಮಚಕ್ರವನ್ನು ಸೇರಿಸುವಂತೆ ತಿಳಿಸಿದರು. ಇವರೆಲ್ಲರ ಮಾರ್ಗದರ್ಶನದಲ್ಲಿ ವೆಂಕಯ್ಯ ರಚಿಸಿದ ಬಾವುಟವನ್ನು 1931ರಲ್ಲಿ ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​​ ರಾಷ್ಟ್ರ ಧ್ವಜವೆಂದು ಘೋಷಿಸಿತು. 1947ರಲ್ಲಿ ಈ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಘೋಷಣೆ ಮಾಡಿದರು. ವೆಂಕಯ್ಯ ಅವರು 1963ರಲ್ಲಿ ದೈವಾಧೀನರಾದರು.
==================

Comments