ಪಿಂಕ್‌ ಸಿಟಿ ಇನ್ನು ವಿಶ್ವ ಪಾರಂಪರಿಕ ತಾಣ



👉🌹 ಪಿಂಕ್‌ ಸಿಟಿ ಇನ್ನು ವಿಶ್ವ ಪಾರಂಪರಿಕ ತಾಣ
==================
ಶಿಲ್ಪ ಕಲೆ ಮತ್ತು ಸಾಂಸ್ಕೃತಿಕ ವೈಭವದಿಂದ ಜಗತ್ತನ್ನೇ ಸೆಳೆಯುತ್ತಿರುವ ಪಿಂಕ್‌ ಸಿಟಿ ಜೈಪುರ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಯುನೆಸ್ಕೊ ವಿಶ್ವ ಪಾರಂಪರಿಕ ಸಮಿತಿಯ 43ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ.
==============
🌹 ಕಳೆದ ವರ್ಷ ಪರಿಶೀಲನೆ
===============
ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಅಂತಾರಾಷ್ಟ್ರೀಯ ಮಂಡಳಿಯು 2018ರಲ್ಲಿ ಜೈಪುರಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಬಳಿಕ ಸಮಿತಿಗೆ ನಾಮಕರಣ ಮಾಡಿತು. ಇದನ್ನು ಆಧರಿಸಿ ಯುನೆಸ್ಕೊ ತನ್ನ ಪಾರಂಪರಿಕ ಪಟ್ಟಿಗೆ ಸೇರಿಸಿಕೊಂಡಿದೆ.
================
🌹 ಐತಿಹಾಸಿಕ ನಗರಿ
================
ದೊರೆ ಎರಡನೇ ಸವಾಯಿ ಜೈಸಿಂಗ್‌ ಅವರು 1727ರಲ್ಲಿ ಕಟ್ಟಿದ ಐತಿಹಾಸಿಕ ನಗರವಿದು. ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ರಾಜಸ್ಥಾನದ ರಾಜಧಾನಿ. ವಿದ್ಯಾಧರ ಆಚಾರ್ಯ ಎಂಬವರು ಪ್ಲ್ಯಾನ್‌ ಮಾಡಿದ ಜೈಪುರ ದೇಶದ ಮೊದಲ ಯೋಜಿತ ನಗರ. 1876ರಲ್ಲಿ ವೇಲ್ಸ್‌ನ ರಾಜಕುಮಾರ ಇಲ್ಲಿಗೆ ಭೇಟಿ ನೀಡಿದ್ದರು. ಆತಿಥ್ಯಕ್ಕೆ ಗುಲಾಬಿ ರಂಗು ಪ್ರಸಿದ್ಧ ಎಂಬ ಕಾರಣಕ್ಕೆ ಮಹಾರಾಜ ರಾಮ್‌ ಸಿಂಗ್‌ ಅವರು ಇಡೀ ಪಟ್ಟಣಕ್ಕೆ ಗುಲಾಬಿ ರಂಗು ಬಳಿಸಿದ್ದರು.
=================
🌹 ಏನೇನಿದೆ ಜೈಪುರದಲ್ಲಿ?
================
ಆಮೆರ್‌ ಪ್ಯಾಲೇಸ್‌, ಸಿಟಿ ಪ್ಯಾಲೇಸ್‌, ಜಂತರ್‌ ಮಂತರ್‌, ಹವಾ ಮಹಲ್‌, ನಹಾರ್‌ ಗಢ ಕೋಟೆ, ಅಲ್ಬರ್ಟ್‌ ಹಾಲ್‌ ಮ್ಯೂಸಿಯಂ, ಜೈಗಢ ಕೋಟೆ, ಬಿರ್ಲಾ ಟೆಂಪಲ್‌, ಜಲ್‌ ಮಹಲ್‌, ದೊರೆಗಳ ಸಮಾಧಿ, ಸಿಸೋಡಿಯಾ ರಾಣಿ ಅರಮನೆ ಮತ್ತು ಉದ್ಯಾನ, ವಿದ್ಯಾಧರ್‌ ಗಾರ್ಡನ್‌, ದಿಗಂಬರ ಜೈನ್‌ ಮಂದಿರ್‌, ಅಮರ್‌ ಜವಾನ್‌ ಜ್ಯೋತಿ
=================
🌹 1092ನೇ ತಾಣ
===============
 ಯುನೆಸ್ಕೊ167 ದೇಶಗಳಲ್ಲಿ 1092 ಜಾಗಗಳನ್ನು ಪಾರಂಪರಿಕ ತಾಣಗಳಾಗಿ ಗುರುತಿಸಿದೆ. ಇದಕ್ಕೆಂದೇ ರೂಪಿಸಲಾದ ಸಮಿತಿ ಜಗತ್ತಿನಾದ್ಯಂತ ಪರಂಪರೆ ಮತ್ತು ಜೈವಿಕ ತಾಣಗಳನ್ನು ಗುರುತಿಸಿ ವರದಿ ನೀಡುತ್ತದೆ. ವರ್ಷಕ್ಕೊಮ್ಮೆ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ.
================
ಜೈಪುರ ಸಂಸ್ಕೃತಿ ಮತ್ತು ಶೌರ್ಯದ ಹಿನ್ನೆಲೆ ಹೊಂದಿರುವ ನಗರ. ಸುಂದರ ಮತ್ತು ಶಕ್ತಿಶಾಲಿ ಪಟ್ಟಣ. ಜೈಪುರದ ಆತಿಥ್ಯ ಜಗತ್ತಿನ ಎಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತದೆ. ಈ ನಗರ ಯುನೆಸ್ಕೊದ ಜಗತ್ತಿನ ಪಾರಂಪರಿಕ ಪಟ್ಟಿಯನ್ನು ಸೇರಿರುವುದು ತುಂಬ ಸಂತೋಷದ ಸಂಗತಿ.
================

Comments