ದುಬೈ ವಿಮಾನ ನಿಲ್ದಾಣಗಳಲ್ಲಿ ಭಾರತದ ಕರೆನ್ಸಿ ಸ್ವೀಕಾರ

ಮಾಹಿತಿ ವೇದಿಕೆ

👉🌹 ದುಬೈ ವಿಮಾನ ನಿಲ್ದಾಣಗಳಲ್ಲಿ ಭಾರತದ ಕರೆನ್ಸಿ ಸ್ವೀಕಾರ
=================
ದುಬೈನ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭಾರತೀಯ ಕರೆನ್ಸಿ ಬಳಸಬಹುದು ಎಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಗಲ್ಫ್‌ ನ್ಯೂಸ್‌ ಪತ್ರಿಕೆ ವರದಿ ಮಾಡಿದೆ.
================
ಭಾರತೀಯ ಪ್ರವಾಸಿಗರಿಗೆ ಈ ಹಿಂದೆ ಹಣ ವಿನಿಮಯ ಮಾಡಿ ಕೊಳ್ಳುವಾಗ ದೊಡ್ಡ ಮೊತ್ತದ ಹಣ ನಷ್ಟವಾಗುತ್ತಿತ್ತು. ಇನ್ನು ಮುಂದೆ ಅವರಿಗೆ ಅನುಕೂಲವಾಗಲಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 3 ಟರ್ಮಿನಲ್‌ಗಳಲ್ಲಿ , ಅಲ್ ಮಕ್ತೌಮ್ ವಿಮಾನ ನಿಲ್ದಾಣಗಳ ಡ್ಯುಟಿ ಫ್ರೀ ಮಳಿಗೆ ಗಳಲ್ಲಿ ಕರೆನ್ಸಿ ಬಳಸಬಹುದು.
=================

Comments