ಜಿ-20



👉🌹 ಜಿ-20 ಎಂದರೇನು? ಅಲ್ಲೇನು ಚರ್ಚಿಸುತ್ತಾರೆ? ತಿಳಿದಿರಬೇಕಾದ ಸಂಗತಿಗಳು
=================
ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಜಗತ್ತಿನ 19 ಪ್ರಮುಖ ದೇಶಗಳು ಮತ್ತು ಐರೋಪ್ಯ ಒಕ್ಕೂಟ ಇದರಲ್ಲಿ ಭಾಗವಹಿಸಿವೆ. ಜಿ-20 ಎಂದರೇನು? 20 ದೇಶಗಳ ಸಮೂಹ (ಗ್ರೂಪ್). ಇದನ್ನು ಜಿ-20 ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ಆದರೆ, ಈ ಶೃಂಗಸಭೆಯನ್ನು ಯಾವ ಕಾರಣಕ್ಕಾಗಿ ನಡೆಸಲಾಗುತ್ತದೆ? ಅದು ಏಕೆ ಮಹತ್ವದ್ದು? ಎಂಬ ಕುತೂಹಲಗಳಿಗೆ ಇಲ್ಲಿದೆ ಉತ್ತರ.
=================
ಅತ್ಯಂತ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶಗಳ ಮುಖಂಡರು ನಡೆಸುವ ಶೃಂಗಸಭೆ ಜಿ-20. ಇದರ ಸದಸ್ಯ ದೇಶಗಳು ಜಗತ್ತಿನ ಜಿಡಿಪಿಯ ಶೇ 85ರಷ್ಟು ಮತ್ತು ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟನ್ನು ಹೊಂದಿವೆ.
==============
ಈ ಗುಂಪಿಗೆ ತನ್ನದೇ ಆದ ಕಾಯಂ ನೆಲೆ ಎಂದೇನೂ ಇಲ್ಲ. ಹೀಗಾಗಿ ಪ್ರತಿ ಡಿಸೆಂಬರ್‌ನಲ್ಲಿ ಜಿ-20ಯಲ್ಲಿನ ಒಂದು ದೇಶ ಅದರ ಆತಿಥ್ಯ ವಹಿಸುತ್ತದೆ. ಇದು ಪ್ರತಿ ವರ್ಷ ಬದಲಾಗುತ್ತಿರುತ್ತದೆ. ಈ ದೇಶವು ಮುಂದಿನ ಶೃಂಗಸಭೆಯನ್ನು ಆಯೋಜಿಸುವ ಮತ್ತು ಮುಂದಿನ ವರ್ಷ ಸಣ್ಣ ಸಣ್ಣ ಸಭೆಗಳನ್ನು ನಡೆಸುವ ಹೊಣೆಗಾರಿಕೆ ನಿರ್ವಹಿಸುತ್ತದೆ.
================
ಜಿ-20ಯಲ್ಲಿ ಸದಸ್ಯ ದೇಶಗಳಲ್ಲದೆ ಇತರೆ ಸದಸ್ಯೇತರ ದೇಶಗಳನ್ನೂ ಅತಿಥಿಗಳನ್ನಾಗಿ ಆಹ್ವಾನಿಸುವ ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಸ್ಪೇನ್‌ಅನ್ನು ಯಾವಾಗಲೂ ಈಸಭೆಗೆ ಆಹ್ವಾನಿಸಲಾಗುತ್ತದೆ.
================
ಪೂರ್ವ ಏಷ್ಯಾದಲ್ಲಿನ ಆರ್ಥಿಕ ಬಿಕ್ಕಟ್ಟು ಜಗತ್ತಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದ ಬಳಿಕ ಮೊದಲ ಜಿ-20 ಸಭೆ 1999ರಲ್ಲಿ ಬರ್ಲಿನ್‌ನಲ್ಲಿ ನಡೆದಿತ್ತು.
===============
ಚೀನಾ, ಬ್ರೆಜಿಲ್ ಮತ್ತು ಸೌದಿ ಅರೇಬಿಯಾದಂತಹ ಅತ್ಯಂತ ವೇಗದ ಆರ್ಥಿಕ ಅಭಿವೃದ್ಧಿ ದೇಶಗಳು ಸೇರಿದಂತೆ ಜಗತ್ತಿನ ಅತ್ಯಂತ ಶ್ರೀಮಂತ ಆರ್ಥಿಕತೆಗಳನ್ನು ಒಳಗೊಂಡ ಜಿ8 ಗುಂಪು ಸಹ ಇದೆ. ಪ್ರಸ್ತುತ ರಷ್ಯಾವನ್ನು ಜಿ8 ಹೊರಗಿಟ್ಟಿರುವುದರಿಂದ ಅದನ್ನು ಜಿ7 ಎಂದು ಕರೆಯಲಾಗುತ್ತದೆ.
=================
👉🌹 ಜಿ-20 ದೇಶಗಳು ಯಾವುವು?
===================
ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಟರ್ಕಿ, ರಷ್ಯಾ, ಇಟಲಿ, ಜರ್ಮನಿ, ಫ್ರಾನ್ಸ್, ಯುಕೆ, ಕೆನಡಾ, ಅಮೆರಿಕ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಯುರೋಪಿಯನ್ ಒಕ್ಕೂಟ.
=================
ಜಿ-20ಯಲ್ಲಿ ಆರಂಭದಲ್ಲಿ ದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಭಾಗವಹಿಸುತ್ತಿದ್ದರು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದ ಬಳಿಕ ಈ ಪದ್ಧತಿ ಬದಲಾಯಿತು. ಬ್ಯಾಂಕ್‌ಗಳು ನೆಲಕಚ್ಚಿದವು, ನಿರುದ್ಯೋಗ ಸಮಸ್ಯೆ ಉಲ್ಬಣವಾಯಿತು ಮತ್ತು ಸಂಬಳಗಳಿಲ್ಲದೆ ಪರದಾಡುವಂತಾಯಿತು. ಆಗ ಈ ಒಕ್ಕೂಟವು ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳ ತುರ್ತು ಸಮಿತಿಯಾಗಿ ಬದಲಾಯಿತು. ಅದೇ ವರ್ಷ ಮೊದಲ ಬಾರಿ ದೇಶಗಳ ಮುಖಂಡರು ಸಭೆ ನಡೆಸಿದರು.
==================
👉🌹 ಚರ್ಚೆಯಾಗುವ ವಿಷಯಗಳೇನು?
=================
ಪ್ರಸ್ತುತದಲ್ಲಿನ ಅತ್ಯಂತ ಪ್ರಮುಖವಾದ ಆರ್ಥಿಕ ಮತ್ತು ಹಣಕಾಸು ವಿಚಾರಗಳ ಬಗ್ಗೆ ಚರ್ಚಿಸಲು ಜಾಗತಿಕ ಮುಖಂಡರು ಇಲ್ಲಿ ಸೇರುತ್ತಾರೆ. ತಮ್ಮ ಯೋಜನೆಗಳು ಸೂಕ್ತವಾಗಿ ಎಲ್ಲರಿಗೂ ಮನವರಿಕೆಯಾಗಿವೆಯೇ ಎಂದು ಸದಸ್ಯರು ಬಳಿಕ ಖಚಿತಪಡಿಸಿಕೊಳ್ಳಲು ಮುಂದಾಗುತ್ತಾರೆ.
================
ವಾಣಿಜ್ಯ, ಹವಾಮಾನ ಬದಲಾವಣೆ ಮತ್ತು ಇರಾನ್‌ ಜತೆಗಿನ ಸಂಬಂಧದಲ್ಲಿನ ಬಿಕ್ಕಟ್ಟು ಪ್ರಸಕ್ತ ವರ್ಷದ ಶೃಂಗಸಭೆಯ ಪ್ರಮುಖ ವಿಚಾರಗಳಾಗಿವೆ. ಶೃಂಗಸಭೆಯಾಚೆಗೂ ದೇಶಗಳ ಮುಖಂಡರು ಮಹತ್ವದ ಮಾತುಕತೆಗಳನ್ನು ನಡೆಸುತ್ತಾರೆ.
=================
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಥೆರೆಸಾ ಮೇ ಅವರು ರಷ್ಯಾ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
================
ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕತೆ ಯಾವಾಗಲೂ ಮಾತುಕತೆಯ ಮುಖ್ಯ ವಿಚಾರವಾಗಿರುತ್ತದೆ. 2009ರ ಲಂಡನ್ ಶೃಂಗಸಭೆಯಲ್ಲಿ ಜಗತ್ತಿನ ಅತಿ ಹೀನಾಯ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಜಾಗತಿಕ ಆರ್ಥಿಕತೆಗೆ 5 ಟ್ರಿಲಿಯನ್ ಡಾಲರ್ ಸಹಾಯ ಮಾಡಲು ವಿಶ್ವ ನಾಯಕರು ಬದ್ಧತೆ ಪ್ರದರ್ಶಿಸಿದ್ದರು.
===============
👉🌹 ಜಿ-20 ಯಶಸ್ವಿಯೇ?
================
ಗುಂಪಿನ ಸಣ್ಣ ಗಾತ್ರವು ಹೆಚ್ಚು ಯಶಸ್ವಿಯಾಗುತ್ತದೆ. ಕಡಿಮೆ ಸಂಖ್ಯೆಯ ನಾಯಕರನ್ನು ಆಹ್ವಾನಿಸಿದರೆ ಬೇಗನೆ ಚರ್ಚೆ ನಡೆದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಜಿ-20 ಫಲಪ್ರದವಾಗಿದೆ ಎನ್ನಲಾಗುತ್ತದೆ. ಆದರೆ, ಮಹತ್ವದ ವಿಚಾರಗಳನ್ನು ಚರ್ಚಿಸುವಾಗ ಹೆಚ್ಚಿನ ಸಂಖ್ಯೆಯ ದೇಶಗಳನ್ನು ಹೊರಗಿಡುವುದು ನ್ಯಾಯೋಚಿತವಲ್ಲ ಎಂಬ ಅಭಿಪ್ರಾಯವಿದೆ. ಸುಮಾರು 170 ದೇಶಗಳು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ.
==================
ಈ ಸಭೆಯಲ್ಲಿ ಯಾವುದೇ ಔಪಚಾರಿಕ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇಲ್ಲಿ ನಡೆಯುವ ಒಪ್ಪಂದಗಳು ಕಾನೂನಾತ್ಮಕ ರಕ್ಷೆ ಹೊಂದಿರುವುದಿಲ್ಲ. ಶೃಂಗಸಭೆ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆಗಳು ಸಹ ಎದುರಾಗುವುದು ಸಹಜ.
================
2009ರಲ್ಲಿ ಲಂಡನ್‌ನಲ್ಲಿ ನಡೆದ ಜಿ-20 ಪ್ರತಿಭಟನೆ ವೇಳೆ ಮನೆಗೆ ತೆರಳುತ್ತಿದ್ದ ಇಯಾನ್ ತೋಮ್ಲಿನ್ಸನ್ ಎಂಬ ಪತ್ರಿಕಾ ಮಾರಾಟಗಾರ ಪ್ರತಿಭಟನೆಯೊಳಗೆ ಸಿಲುಕಿ ಮೃತಪಟ್ಟಿದ್ದರು. ಕಳೆದ ವರ್ಷ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನೆ ನಡೆದಿತ್ತು.
==============

Comments