ಕಳಿಂಗ ಯುದ್ದ

🌺🔘 ಕಳಿಂಗ ಯುದ್ದ ಎಂದು..? ಏಕೆ ನಡೆಯಿತು..? ಪರಿಣಾಮಗಳೇನು..? 🔘🌺


#Kalinga_Battle , #Kalinga_War


ಕಳಿಂಗ ಯುದ್ಧವು ಕ್ರಿ.ಪೂ.261 ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗು ನಡೆದ ಯುದ್ಧ. ಇದು ಸಾಮ್ರಾಟ್ ಅಶೋಕನ ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಗಮನಾರ್ಹವಾದ ಘಟನೆ. ಅಶೋಕನ ಏಕೈಕ ಪ್ರಮುಖ ಯುದ್ಧವಾದ ಈ ಯುದ್ದ, ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ಧಗಳಲ್ಲಿ ಒಂದಾಗಿದೆ. ಅಶೋಕನು ರ್ಕಿ.ಪೂ.261ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು. ಅಶೋಕನ 13ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು, ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲಾ ಎಂಬುದಾಗಿ ತಿಳಿದು ಬರುತ್ತದೆ. ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೇಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ಧವನ್ನು ಗೆದ್ದಿತು. ಈ ಯುದ್ಧದ ಅಪಾರ ರಕ್ತಪಾತವು ಅಶೋಕನ ಮನಃಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿತು.


🆕 ಕಳಿಂಗದ ಆಕ್ರಮಣ ರಾಜಕೀಯ ಮತ್ತು ಆರ್ಥಿಕ ಎರಡೂ ಕಾರಣಗಳಿವೆ.ಕಳಿಂಗ ರಾಜ್ಯವು ಪ್ರಸಿದ್ಧ ಮತ್ತು ಶ್ರೀಮಂತ ಪ್ರದೇಶವಾಗಿತ್ತು. ಅದು ಕಲೆಗಳಲ್ಲಿ ನುರಿತ ಜನತೆಯನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತದೆ. ಕಳಿಂಗದ ಜನರು ಕಡಲಿನಾಚೆಯ ದೇಶಗಳೊಂದಿಗೆ ವ್ಯಾಪಾರ ಮಾಡಿದವರಲ್ಲಿ ಭಾರತದಲ್ಲಿಯೇ ಮೊದಲನೆಯವರು. ಅಲ್ಲಿನ ಜನತೆ ಮುಕ್ತವಾದ ಸಂಸ್ಕೃತಿ ಮತ್ತು ಸಮಾನ ನಾಗರಿಕ ಸಂಹಿತೆ ಪಾಲಿಸುತ್ತಿದ್ದರು.ಅಶೋಕನ ತಂದೆ ಬಿಂದುಸಾರನ ಕಾಲದಿಂದಲೂ ಮಗಧ ಮೂಲದ ಮೌರ್ಯ ಸಾಮ್ರಾಜ್ಯವು ಪ್ರಾಂತೀಯ ವಿಸ್ತರಣೆ ನೀತಿ ಅನುಸರಿಸುತ್ತಿತ್ತು. ನಂದರ ಕಾಲದಲ್ಲಿ ಮಗಧದ ಅಧೀನದಲ್ಲಿದ್ದ ಕಳಿಂಗ ಪ್ರದೇಶವು ಮೌರ್ಯರ ಆಳ್ವಿಕೆಯ ಆರಂಭದಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. ಮಗಧದ ಸಾಮ್ರಾಟರಿಗೆ ಇದು ಒಂದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿತ್ತು. ಇದು ಮೌರ್ಯರು ತಮ್ಮ ರಾಜಕೀಯ ಪ್ರತಿಷ್ಠೆಗೆ ಧಕ್ಕೆಯೆಂದು ಪರಿಗಣಿಸಿದರು. ಅವರಿಗೆ ಕಳಿಂಗದ ಪರಾಧೀನ ಪೂರ್ಣಗೊಳಿಸುವುದು ಕಡ್ಡಾಯವಾಗಿ ತೋರಿತು. ಹೀಗಾಗಿ ಅಶೋಕನು ತನ್ನ ಸಿಂಹಾಸನ ಭದ್ರ ಪಡಿಸಿದ ನಂತರ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು.


🆕 ಈ ಯುದ್ಧವು ಅಶೋಕನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸುಮಾರು ಕ್ರಿ.ಪೂ. 261ರಲ್ಲಿ ಜರುಗಿತು. ಈ ಹಿಂದೆ ಅಶೋಕನ ತಾತನಾದ ಚಂದ್ರಗುಪ್ತ ಮೌರ್ಯನು ಕಳಿಂಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವನನ್ನು ಹಿಮ್ಮೆಟ್ಟಿಸಲಾಗಿತ್ತು. ಅಶೋಕನಿಗೂ ಕೇವಲ ಒಂದು ಘೋರ ಯುದ್ಧದ ನಂತರವೇ ವಿಜಯ ದೊರೆಯಿತು.

ಅಶೋಕನದ್ದು 4 ಲಕ್ಷ ಯೋಧರ ಸೇನೆಯಾದರೆ, ಕಳಿಂಗ ದೇಶದಲ್ಲಿ 60,000 ಪದಾತಿಗಳು, 10,000 ಅಶ್ವದಳ ಹಾಗು 700 ಗಜಸೇನೆಗಳಿತ್ತು. ಈ ಸಮರದಲ್ಲಿ ಸುಮಾರು 1,50,000 ಕಳಿಂಗದ ಯೋಧರು ಹಾಗೂ 1,00,000 ಅಶೋಕನ ಯೋಧರು ಸಾವನ್ನಪ್ಪಿದರು. ಇದರ ಪರಿಣಾಮವಾಗಿ ಯುದ್ಧ ಭೂಮಿಯ ಸಮೀಪದಲ್ಲಿ ಹರಿಯುವ ದಯಾ ನದಿಯ ಬಣ್ಣ ಸಾವಿಗೀಡದವರ ರಕ್ತದಿಂದ ಕೆಂಪಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ.


🔵 Highlights :🔵


👉 ಕಳಿಂಗ ಯುದ್ದವು ಕ್ರಿ.ಪೂ 261 ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗೂ ನಡೆದ ಯುದ್ದ.

👉 ಕಳಿಂಗ ರಾಜ್ಯವು ಈಗಿನ ಒರಿಸ್ಸಾದಲ್ಲಿದೆ. ಈ ಯುದ್ದವು ಧೌಲಿ ಪ್ರದೇಶದ ಬಳಿ ದಯಾ ನದಿಯ ತೀರದಲ್ಲಿ ನಡೆಯಿತು.

👉 ಈ ಯುದ್ದವು ಸಾಮ್ರಾಟ್ ಅಶೋಕನ ಕೀರಿಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಹಮನಾರ್ಹವಾದ ಘಟನೆ.

👉 ಅಶೋಕನ ಪ್ರಮುಖ ಯುದ್ದವಾದ ಈ ಯುದ್ದ ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ದಗಳಲ್ಲಿ ಒಂದಾಗಿದೆ.

👉 ಈ ಹಿಂದೆ ಅಶೋಕನ ತಾತನಾದ ಚಂದ್ರಗುಪ್ತ ಮೌರ್ಯನು ಕಳಿಂಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವನನ್ನು ಹಿಮ್ಮೆಟ್ಟಿಸಲಾಗಿತ್ತು. ಅಶೋಕನಿಗೂ ಒಂದು ಘೋರ ಯುದ್ದದ ನಂತರವೇ ವಿಜಯ ದೊರೆಯಿತು.

👉 ಅಶೋಕನು ಕ್ರಿ.ಪೂ 261 ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು.

👉 ಅಶೋಕನ 13 ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು. ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲ ಎಂದು ತಿಳಿದು ಬರುತ್ತದೆ.ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಪಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೆಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ದವನ್ನು ಗೆದ್ದಿತು.

👉 ಶಿಲಾಶಾಸನಗಳು ತಿಳಿಸುವಂತೆ ಯುದ್ಧದ ನಂತರ ಸಂಪೂರ್ಣ ಕಳಿಂಗವನ್ನು ಲೂಟಿ ಮಾಡಲಾಯಿತು. ಯುದ್ದವು ಸುಮಾರು 1 ಲಕ್ಷ ಜನರ ಸಾವು ಮತ್ತು ಒಂದೂವರೆ ಲಕ್ಷ ಜನರ ಗಡಿಪಾರಾಗಲು ಕಾರಣವಾಯಿತು. ಅಶೋಕನ ಸೈನ್ಯದ ಸಾವಿರಾರು ಜನರು ಕೂಡ ಈ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಈ ಕ್ರೌರ್ಯದಿಂದ ಅಶೋಕನು ತುಂಬಾ ನೊಂದು ಯುದ್ದದ ಬಗೆಗಿನ ತನ್ನ ನಿಲುವನ್ನು ಬದಲಾಯಿಸಿ , ಮುಂದೆಂದೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ದವನ್ನು ಮಾಡದಿರಲು ಪಣ ತೊಟ್ಟನು.

👉 ಈ ಯುದ್ದದ ಅಪಾರ ರಕ್ತಪಾತವು ಅಶೋಕನ ಮನ:ಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿ ತನ್ನ ಅಧೀಕಾರವನ್ನೆಲ್ಲಾ ಈ ಹೊಸಧರ್ಮದ ಪ್ರಚಾರಕ್ಕಾಗಿ ಬಳಸಿದನು.

👉 ಕಳಿಂಗ ಯುದ್ಧದ ಬಗೆಗಿನ ಪ್ರತಿಕ್ರಿಯೆಯನ್ನು ಅವನ “ಹದಿಮೂರನೆ ಶಾಸನ”ದಲ್ಲಿ ದಾಖಲಿಸಲಾಗಿದೆ.



Comments

Popular Posts